ಖಡಕ್ ರೊಟ್ಟಿ – ಉತ್ತರ ಕರ್ನಾಟಕದ ಜನತೆಯ ಗಡಸುತನದ ರಹಸ್ಯ !

By Team Total Karnataka | Sept  06, 2016

ಉತ್ತರ ಕರ್ನಾಟಕದ ಸಸ್ಯಾಹಾರಿ ತಿನಿಸುಗಳಲ್ಲಿ ಈ ಕೆಳಕಂಡ ಪದಾರ್ಥಗಳನ್ನು ಸಾಮಾನ್ಯವಾಗಿ ಕಾಣಬಹುದು: ಜೋಳದ ರೊಟ್ಟಿ – ಜೋಳದ ಹಿಟ್ಟಿನಿಂದ ಮಾಡಿದ ಉಂಡೆಯನ್ನುಕೈಯಲ್ಲಿ ಬಡಿದು ಅಗಲವಾದ ತೆಳು ರೊಟ್ಟಿಯನ್ನು ಮಾಡಿ, ಕಾವಲಿಯ ಮೇಲೆ ಬೇಯಿಸಿ, ಕೆಂಡದ ಮೇಲೆ ಉಬ್ಬಿಸಿದ ರೊಟ್ಟಿಗಳು ತಿನ್ನಲು ರುಚಿ, ದೇಹಕ್ಕೆ ಹಿತ. ಕೆಲವೊಮ್ಮೆ ಸಜ್ಜೆ ಮತ್ತು ಗೋಧಿ ಹಿಟ್ಟಿನಿಂದಲೂ ಇಂತಹ ರೊಟ್ಟಿಯನ್ನು ಮಾಡುವುದುಂಟು. ಇಂತಹ ರೊಟ್ಟಿಯನ್ನು ಒಣಗಿಸಿ ಖಡಕ್ ರೊಟ್ಟಿಯನ್ನಾಗಿ ಮಾಡಿಟ್ಟುಕೊಂಡರೆ, ಹೆಚ್ಚು ದಿನ ಇಡಲು ಸಾಧ್ಯ ಮತ್ತು ಪ್ರಯಾಣದ ವೇಳೆಯಲ್ಲಿ ಎಲ್ಲೆಂದರಲ್ಲಿಗೆ ಕೊಂಡೊಯ್ಯುವುದಕ್ಕೂ ಅನುಕೂಲ ಎಂಬುದು ಉತ್ತರ ಕರ್ನಾಟಕದ ಮಂದಿ ಕಂಡುಕೊಂಡು ಪರಿಪಾಲಿಸಿಕೊಂಡು ಬಂದಿರುವ ಸತ್ಯ.

ರೊಟ್ಟಿಯ ಜೊತೆ ಬದನೆಕಾಯಿ ಎಣ್ಣೆಗಾಯಿ, ರುಬ್ಬಿದ ಶೇಂಗಾವನ್ನು ತುಂಬಿದ ತುಂಬುಗಾಯಿ ಹೆಚ್ಛಾಗಿ ತಿನ್ನುವ ಪದಾರ್ಥಗಳು. ಸಣ್ಣ ಗಾತ್ರದ ಇಡೀ ಬದನೆಕಾಯಿಯನ್ನು ಎಳ್ಳು, ಶುಂಠಿ, ಬೆಳ್ಳುಳ್ಳಿ, ಗರಂ ಮಸಾಲ, ಉಪ್ಪು, ಈರುಳ್ಳಿಯ ಜೊತೆ ಎಣ್ಣೆಯಲ್ಲಿ  ಸಣ್ಣಗೆ ಹುರಿದು ಮಾಡಿದ ಎಣ್ಣೆಗಾಯಿ ರೊಟ್ಟಿಯ ಜೊತೆ ಸವಿಯಲು ಬಲು ರುಚಿ. ಕೆಲವೊಮ್ಮೆ ಬದನೆಕಾಯಿಯ ಬದಲು ಇತರೆ ತರಕಾರಿಗಳನ್ನು ಬಳಸಿ ರುಚಿಯಾದ ಪಲ್ಯವನ್ನು ಮಾಡುವುದೂ ಉಂಟು. ಪಲ್ಯದ ಜೊತೆಗೇ ಶೇಂಗಾದಿಂದ ಮಾಡಿದ ಚಟ್ನಿಗೆ  ಮೊಸರು ಬೆರೆಸಿಕೊಂಡು ಅಥವಾ ಮೊಸರಿನಿಂದ ಮಾಡಿದ ಶ್ರೀಖಂಡದಂತಹ ಸಿಹಿ ಪದಾರ್ಥವನ್ನು ನಂಚಿಕೊಂಡು ತಿನ್ನ್ನುವುದೂ ಸಹ ಸರ್ವೇ ಸಾಮಾನ್ಯ. ಶೇಂಗಾ ಚಟ್ನಿ ಮಾತ್ರವಲ್ಲದೇ, ಅಗಸೆ ಬೀಜದ ಚಟ್ನಿ, ಗುರೆಳ್ಳು ಚಟ್ನಿ, ಕೆಂಪು ಮೆಣಸಿನಿಂದ ಮಾಡಿದ ‘ಕೆಂಪುಖಾರ’ ಎಂಬ ಚಟ್ನಿಯೂ ಸಹ ರೊಟ್ಟಿಯ ಜೊತೆ ಹೆಚ್ಛಾಗಿ ಉಪಯೋಗಿಸಲ್ಪಡುತ್ತವೆ.

ukfoods

ಎಣ್ಣೆಗಾಯಿ, ಚಟ್ನಿಗಳು ಮಾತ್ರವಲ್ಲದೇ ರೊಟ್ಟಿಯ ಜೊತೆ ನಂಚಿಕೊಳ್ಳುವ ಇನ್ನೊಂದು ಪದಾರ್ಥವೆಂದರೆ ಕಾಳಿನ ಪಲ್ಯ ಮತ್ತು ಬೇಳೆ ಕೋಸಂಬರಿ. ಮೊಳಕೆ ಕಾಳು, ಹೆಸರು ಕಾಳು, ಮೊಳಕೆ ಬಂದ ಕಡಲೆ ಇತ್ಯಾದಿಗಳನ್ನು ಮೆಂತೆ, ಸಬ್ಬಸಿಗೆ, ಪಾಲಕ್ ಮತ್ತಿತರ ಹಸಿರು ಸೊಪ್ಪುಗಳ ಜೊತೆ ಗೊಂಡೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಗಳನ್ನು ಬೆರೆಸಿ ಒಗ್ಗರಣೆ ಮಾಡಿದ ಕೋಸಂಬರಿಯಂತಹ ಪಲ್ಯಗಳು ರೊಟ್ಟಿಯೊಡನೆ ನಂಚಿಕೊಳ್ಳಲು ಬೆಲು ರುಚಿಯಾಗಿದ್ದು ಬಾಯಲ್ಲಿ ನೀರೂರಿಸುತ್ತವೆ. ಈರುಳ್ಳಿ, ಹಸಿಮೆಣಸು, ಮೆಂತೆ ಸೊಪ್ಪಿಗೆ ಮೋಸರು ಬೆರೆಸಿ ಮಾಡಿದ ‘ಮೊಸರುಬಜ್ಜಿ’ಯೂ ಸಹ ರೊಟ್ಟಿ ಮತ್ತು ಖಾರದ ಪಲ್ಯಗಳ ನಂತರ ಹೊಟ್ಟೆಯನ್ನು ಸ್ವಲ್ಪ ತಂಪು ಮಾಡಲು ಬಳಸಲ್ಪಡುತ್ತದೆ.

ಕಡಲೆ ಬೇಳೆಯನ್ನು ರುಬ್ಬಿ ಮಾಡಿದ ಹಿಟ್ಟಿನ ಜೊತೆ ಪಾಲಕ್, ಮೆಂತೆಯಂತಹ ಹಸಿರು ಸೊಪ್ಪುಗಳನ್ನು ಸೇರಿಸಿ ಮಾಡಿದ ಮಸಾಲ ಕೇಕ್ ಗಳನ್ನೂ ಸಹ ಊಟದ ಜೊತೆ ಬಡಿಸುತ್ತಾರೆ. ಇದಲ್ಲದೇ, ಸೌತೇಕಾಯಿ, ಕ್ಯಾರೆಟ್, ಮೂಲಂಗಿ, ಈರುಳ್ಳಿ, ಹಸಿಮೆಣಸಿನಂತಹ ಕಚ್ಛಾ ಹಸಿ ತರಕಾರಿಗಳನ್ನೂ ಸಹ ಊಟದ ಜೊತೆ ಮೆಲ್ಲುವುದೂ ಸಹ ಊಟಕ್ಕೆ ಇನ್ನಷ್ಟು ಮೆರಗು ನೀಡುತ್ತದೆ.

ಉತ್ತರ ಕರ್ನಾಟಕದ ಸಸ್ಯಾಹಾರಿ ಊಟದಲ್ಲಿ ರೊಟ್ಟಿಯ ಜೊತೆಗೇ ಅನ್ನ ಸಾರು ಕೂಡ ಬಡಿಸಲ್ಪಡುತ್ತದೆ. ಟೊಮ್ಯಾಟೋ ಅಥವಾ ಹುಣಿಸೆಹಣ್ಣಿನಿಂದ ಮಾಡಿದ ಸಾರು, ಹಪ್ಪಳ, ಬೆಣ್ಣೆ, ಮೊಸರು, ಮಜ್ಜಿಗೆಗಳು ಊಟವನ್ನು ಭೋಜನವನ್ನಾಗಿಸುತ್ತವೆ.

ಉತ್ತರ ಕರ್ನಾಟಕದ ಜನತೆಯ ಹೊರನೋಟದ ಗಡಸುತನ ಮತ್ತು ಒಳಗಿನ ಮೃದು ಹೃದಯದ  ರಹಸ್ಯವಾಗಿರುವ ಜೋಳದರೊಟ್ಟಿ ಮತ್ತಿತರ ತಿನಿಸುಗಳನ್ನು   ಟೋಟಲ್ ಕರ್ನಾಟಕ ಅಂತರ್ಜಾಲ ವಾಹಿನಿಯ ಮೂಲಕ                                                                     (https://www.totalkarnataka.com/food-product/north-karnataka-foods.html ) ಈಗ  ಖರೀದಿಸಿ ಸವಿಯ ಬಹುದಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕದಲ್ಲಿ ಪಾರಂಪರಿಕವಾಗಿ ತಯಾರಿಸಲಾಗುತ್ತಿರುವ  ಉತ್ತರ ಕರ್ನಾಟಕದ ತಿನಿಸುಗಳಿಗೆ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸಬೇಕೆಂಬ ಉದ್ದೇಶದಿಂದ ಟೋಟಲ್ ಕರ್ನಾಟಕವು (http://www.totalkarnataka.com) ಅಂತಹ ತಯಾರಕರನ್ನು ಗುರುತಿಸಿ ಅಂತರ್ಜಾಲ ವಾಹಿನಿಯ ಮೂಲಕ ಜನರನ್ನು ತಲುಪುವ ಗುರಿಹೊಂದಿದೆ.

************

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s