ಭತ್ತದ ತೆನೆಯ ಕಲಾಪ್ರಕಾರ

paddycraftban1

ಕರ್ನಾಟಕ ರಾಜ್ಯವು ವಿಶಿಷ್ಟ ಕಲೆಗಳ ಆಗರ. ಭಾರತವನ್ನು ಆಳಿದ ರಾಜವಂಶಗಳು ಕಲಾ ಪೋಷಕರಾಗಿದ್ದರು ಎನ್ನುವುದು ಚರಿತ್ರಯಿಂದ ನಮಗೆ ತಿಳಿಯುತ್ತದೆ. ಕೃಷ್ಣದೇವರಾಯನ ಕಾಲದಲ್ಲಿ ಕಿನ್ನಾಳ ಕಲೆ,ಟಿಪ್ಪುಸುಲ್ತಾನನ ಕಾಲದಲ್ಲಿ ಚನ್ನಪಟ್ಟಣ ಗೊಂಬೆ, ಮೈಸೂರುರಾಜರ ಕಾಲದಲ್ಲಿ ರೇಷ್ಮೆ, ಬೀದರನ್ನಾಳಿದ ರಾಜವಂಶಗಳಿಂದ ಬಿದರಿ ಕಲೆ ಹೀಗೆ ಪಟ್ಟಿಮಾಡುತ್ತಾ ಸಾಗಬಹುದು. ಜನರಲ್ಲಿ ಕ್ರಿಯಾಶೀಲತೆ ಹೆಚ್ಚಿದಂತೆ ಹೊಸ ಹೊಸ ಕಲಾಪ್ರಕಾರಗಳು ಉದಯಿಸುತ್ತಾ ಹೋಗುತ್ತದೆ. ಅಂಥಹ ಒಂದು ಕಲಾಪ್ರಕಾರ “ಭತ್ತದ ತೆನೆಯ ಕರಕುಶಲ ವಸ್ತುಗಳು”. ಭಾರತದ ಮುಖ್ಯ ಆಹಾರ ಬೆಳೆಗಳಲ್ಲಿ ಭತ್ತವು ಮುಖ್ಯವಾಗಿದೆ. ಪ್ರಕೃತಿಯನ್ನು ಆರಾದಿಸುವ ಭಾರತದಲ್ಲಿ ಧಾನ್ಯಗಳನ್ನು ಧಾನ್ಯಲಕ್ಷ್ಮಿ ಎಂದು ಪೂಜಿಸುವ ಪರಿಪಾಠವಿದೆ. ಭತ್ತದ ತೆನೆಗಳನ್ನು ಮನೆಯ ವಾಸ್ತು ಬಾಗಿಲಿಗೆ ತೂಗುಹಾಕುವುದು ಆಶೀರ್ವಾದ ರೂಪವೆಂದು, ಶುಭಕಾರಕವೆಂಬುದು ನಂಬಿಕೆ. ಈ ಪರಿಪಾಠವೇ ಮುಂದುವರೆದು ಕಲಾವಿದರ ಕಲ್ಪನಾಶಕ್ತಿಯಿಂದ ತೋರಣಗಳ ರೂಪ ಪಡೆದು ನಂಬಿಕೆಯ ಜೊತೆ ಅಲಂಕಾರಿಕವೂ ಆಗಿ ಬಳಸಲಾಗುತ್ತಿದೆ. ಮಾರುಕಟ್ಟೆಯ  ಬೇಡಿಕೆಗನುಗುಣವಾಗಿ ಬೇರೆ ಬೇರೆ ರೂಪಗಳಲ್ಲಿ ಭತ್ತದ ತೆನೆಯ ಕಲಾಕೃತಿಗಳು ರೂಪುಗೊಳ್ಳುತ್ತಿದೆ.

ಗ್ರಾಮೀಣ ಕರ್ನಾಟಕದಲ್ಲಿ ಸಿದ್ಧವಾಗುವ ವಿಶಿಷ್ಟ ಕಲಾಪ್ರಕಾರಗಳಿಗೆ,ಉತ್ಪನ್ನಗಳಿಗೆ ಅಂತರ್ಜಾಲದಲ್ಲಿ ಮಾರುಕಟ್ಟೆಯನ್ನು ಒದಗಿಸಿ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸುವ ಧ್ಯೇಯೋದ್ದೇಶದೊಂದಿಗೆ ಪ್ರಾರಂಭವಾಗಿರುವ ನಮ್ಮ ಟೋಟಲ್ ಕರ್ನಾಟಕ ಅಂತರ್ಜಾಲ ಸಂಸ್ಥೆಯು ಭತ್ತದ ತೆನೆಯ ಕಲಾಕೃತಿಗಳನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸಲು ಸಜ್ಜಾಗಿದೆ.

ಕರ್ನಾಟಕದಲ್ಲಿ ಭತ್ತದ ತೆನೆಯ ಕಲಾಕೃತಿ ಮತ್ತು ಹಸೆಚಿತ್ತಾರಗಳಿಂದ ಗುರುತಿಸಿಕೊಂಡವರು ಸಾಗರ ತಾಲ್ಲೂಕಿನ ಸಿರಿವಂತೆಯಲ್ಲಿರುವ  “ಚಿತ್ರಸಿರಿ”ಯ ಎನ್. ಚಂದ್ರಶೇಖರ್‍ ಮತ್ತು ಶ್ರೀಮತಿ ಗೌರಿ ಚಂದ್ರಶೇಖರ್ ದಂಪತಿಗಳು. ಭತ್ತದಲ್ಲಿ ನಾನಾ ಪ್ರಕಾರಗಳ ತಳಿಗಳಿದ್ದು  ತೆನೆಯ ಉದ್ದ, ದಪ್ಪ,ಬಣ್ಣ,ಕಾಳಿನ ಹಿಡಿಪು ಬೇರೆ ಬೇರೆಯಾಗಿರುತ್ತದೆ.ಬಾಳಿಕೆ ಬರುವ ಸೂಕ್ತವಾದ ಭತ್ತದ ತೆನೆಗಳನ್ನು ಬಳಸಿ ಬಾಗಿಲ ತೋರಣ,ತೂಗು ಹಾಕುವ ಗಣೇಶ,ಹಕ್ಕಿ,ಗಂಡಬೇರುಂಡ,ನವಿಲು, ಪಿರಮಿಡ್ ವಾಲ್ ಹ್ಯಾಂಗಿಂಗ್ ಹೀಗೆ ವಿವಿಧ ನಮೂನೆಗಳಲ್ಲಿ ಭತ್ತದ ತೆನೆಯ ಕಲಾಪ್ರಕಾರಗಳು “ಚಿತ್ರಸಿರಿ”ಯಿಂದ  ಲಭ್ಯ. ಮನೆಯ ಒಳಾಂಗಣದ ಅಂದವನ್ನು ಹೆಚ್ಚಿಸುವ ಜೊತೆ ಗುಬ್ಬಚ್ಚಿಯಂಥ ಪಕ್ಷಿಗಳಿಗೆ ಆಹಾರವಾಗಿಯೂ ಉಪಯೋಗಿ. ಮನೆಯ ಗಾರ್ಡನ್‍ಗಳಲ್ಲಿ ಹಕ್ಕಿ-ಪಕ್ಷಿಗಳನ್ನು ಆಕರ್ಷಿಸಲು ಭತ್ತದ ಗುಚ್ಚಗಳೂ ಲಭ್ಯವಿದ್ದು ಪಕ್ಷಿಪ್ರಿಯರು ಇದರ ಉಪಯೋಗ ಪಡೆಯಬಹುದು.

ಧಾನ್ಯಲಕ್ಷ್ಮಿ ಎಂದು ಪೂಜಿಸಿಕೊಂಡು ರೈತರ ಮನೆಯ ಬಾಗಿಲುಗಳಲ್ಲಿ ತೋರಣಗಳಾಗಿ ಕಂಡುಬರುತ್ತಿದ್ದ ಈ ಕಲಾಪ್ರಕಾರಗಳು, ಈಗ ನಗರಗಳಲ್ಲಿ,ಪ್ರವಾಸಿತಾಣಗಳಲ್ಲಿ,ಕಾರ್ಪೋರೇಟ್ ಕಛೇರಿಗಳಲ್ಲಿ, ದೊಡ್ಡ ದೊಡ್ಡ ಹೋಟೆಲ್‍ಗಳಲ್ಲೂ ಕಾಣಬರುತ್ತಿರುವುದು ಈ ಕಲಾಪ್ರಕಾರದ ಜನಪ್ರಿಯತೆಗೆ ಸಾಕ್ಷಿ. ಟೋಟಲ್ ಕರ್ನಾಟಕ ಅಂತರ್ಜಾಲ ವಾಹಿನಿಯ ಮೂಲಕ ಭತ್ತದ ತೆನೆಯ ಕಲಾಪ್ರಕಾರದ ವಿವಿಧ ನಮೂನೆಗಳನ್ನು   (https://www.totalkarnataka.com/handicrafts/paddy/paddy-crafts.html) ಈಗ  ಖರೀದಿಸ ಬಹುದಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕದಲ್ಲಿ ಪಾರಂಪರಿಕವಾಗಿ ತಯಾರಿಸಲಾಗುತ್ತಿರುವ  ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸಬೇಕೆಂಬ ಉದ್ದೇಶದಿಂದ ಟೋಟಲ್ ಕರ್ನಾಟಕವು (http://www.totalkarnataka.com) ಅಂತಹ ತಯಾರಕರನ್ನು ಗುರುತಿಸಿ ಅಂತರ್ಜಾಲ ವಾಹಿನಿಯ ಮೂಲಕ ಜನರನ್ನು ತಲುಪುವ ಗುರಿಹೊಂದಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s